ಯಾವುದೇ ಸೀಸನ್‌ನಲ್ಲಿ ದೊರೆಯುವ ಹಣ್ಣು ತರಕಾರಿಗಳನ್ನು ಆ ಸೀಸನ್‌ನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮೂಲಂಗಿ ಈ ಚಳಿಗಾಲದಲ್ಲಿ ಹೇರಳವಾಗಿರುವ ದೊರೆಯುವ ತರಕಾರಿ. ಇದನ್ನು ಸಾಂಬಾರ್‌, ಸಲಾಡ್, ಚಟ್ನಿ, ಉಪ್ಪಿನಕಾಯಿ, ಕೋಫ್ತಾ, ಜ್ಯೂಸ್ ಸೇರಿದಂತೆ ಇನ್ನಿತರ ಅಡುಗೆಗಳಲ್ಲಿ ಬಳಸಹುದು. ಮೂಲಂಗಿಯನ್ನು ಹಲವು ರೂಪಗಳಲ್ಲಿ ಮತ್ತು ಹಲವು ವಿಧಗಳಲ್ಲಿ ಆಹಾರವಾಗಿ ಸೇವಿಸಬಹುದು.ವಾಸ್ತವದಲ್ಲಿ ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ. ಇನ್ನೂ ಒಳ್ಳೆಯ ಅಂಶವೆಂದರೆ ಇದನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದು ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ. ಇದನ್ನು ಹಸಿಯಾಗಿ ಸೇವಿಸುವ ಜೊತೆಗೆ ಸಾಂಬಾರ್ ಮೊದಲಾದವುಗಳಲ್ಲಿ ಬೇಯಿಸಿ, ಆಲೂ ಪರೋಟದಂತೆಯೇ ಮೂಲೀ ಪರಾಟ ಎಂಬ ರೊಟ್ಟಿಯಂತೆಯೂ, ಸರಳವಾಗಿ ಬೇಳೆಯೊಟ್ಟಿಗೆ ಬೇಯಿಸಿ ಸೇವಿಸಬಹುದು. 


COMMERCIAL BREAK
SCROLL TO CONTINUE READING

ಮೂಲಂಗಿಯ ಪೌಷ್ಠಿಕ ಮೌಲ್ಯ


ಪೊಟ್ಯಾಸಿಯಮ್: ಈ ಖನಿಜವು ದೇಹದ ದ್ರವಗಳನ್ನು ಸಮನಾಗಿರಿಸುತ್ತದೆ. ಇದು ಹೃದಯದ ಚಟುವಟಿಕೆ ಮತ್ತು ನರಮಂಡಲದ ಕಾರ್ಯವನ್ನು ಸಹ ಸುಧಾರಿಸುತ್ತದೆ


ಫೋಲೇಟ್: ಇದನ್ನು ವಿಟಮಿನ್  ಬಿ ಎಂದೂ ಕರೆಯುತ್ತಾರೆ. ಇದು ಮೂಳೆ ಒಳಭಾಗದಲ್ಲಿ ಬಿಳಿ / ಕೆಂಪು ರಕ್ತ ಕಣಗಳನ್ನು ವೃದ್ಧಿಕರಿಸುತ್ತದೆ. ಮತ್ತು ಡಿಎನ್‌ಎ ಮತ್ತು ಆರ್‌ಎನ್‌ಎ ರಚಿಸುವ ಪ್ರಕ್ರಿಯೆಗೆ ಇದು ಅವಶ್ಯಕವಾಗಿದೆ.


ವಿಟಮಿನ್ ಸಿ: ವಿಟಮಿನ್ ಸಿ ದೇಹದಲ್ಲಿನ ಅನೇಕ ಪ್ರಮುಖ ಕಾರ್ಯಗಳನ್ನು ಒಳಗೊಂಡಿರುತ್ತದೆ ಮತ್ತು ಕಾಲಜನ್ ರಚನೆ ಮತ್ತು ರಕ್ತನಾಳಗಳ  ಬಲವರ್ಧನೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ:ಹೆಚ್ಚಾಗಿ ಮೀನು ತಿನ್ನುವವರೇ ಎಚ್ಚರ! ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ!


1.ಕ್ಯಾನ್ಸರ್ ತಡೆಗಟ್ಟುತ್ತದೆ
ಮೂಲಂಗಿಯಲ್ಲಿ ಗ್ಲುಕೋಸಿನೊಲೇಟ್‌ಗಳಿವೆ ಇವು ತರಕಾರಿಗಳಲ್ಲಿ ಕಂಡುಬರುವ ಗಂಧಕವನ್ನು ಒಳಗೊಂಡಿರುವ ಸಂಯುಕ್ತಗಳಾಗಿವೆ. ಈ ಸಂಯುಕ್ತಗಳು ಜೀವಕೋಶಗಳನ್ನು ಕ್ಯಾನ್ಸರ್ ಗೆ ಕಾರಣವಾಗುವ ಆನುವಂಶಿಕ ರೂಪಾಂತರಗಳಿಂದ ರಕ್ಷಿಸುತ್ತವೆ.ಕ್ಯಾನ್ಸರ್ ಕೋಶಗಳನ್ನು ನಿರ್ಮೂಲನೆ ಮಾಡಲು ಸಹ ಸಹಾಯ ಮಾಡಬಹುದು.


2.ಮಧುಮೇಹವನ್ನು ನಿಯಂತ್ರಿಸುತ್ತದೆ
 ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಡಿಪೋನೆಕ್ಟಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಏರಿಳಿತಕ್ಕೆ ಕಾರಣವಾಗುವ ಹಾರ್ಮೋನ್ ಆಗಿದೆ. ಮೂಲಂಗಿಯು ಅಡಿಪೋನೆಕ್ಟಿನ್ ಅನ್ನು ನಿಯಂತ್ರಿಸುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನುನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.


3.ಹೃದಯದ ಆರೋಗ್ಯವನ್ನು ಸುಧಾರಿಸುವುದು: 
ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್‍ಗಳು, ಕ್ಯಾಲ್ಸಿಯಮ್, ಪೊಟ್ಯಾಸಿಯಮ್ ಸೇರಿದಂತೆ ಇನ್ನಿತರ ಖನಿಜಾಂಶಗಳು ಸಮೃದ್ಧವಾಗಿರುತ್ತವೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.


ಇದನ್ನೂ ಓದಿ: ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ, ಕೊಬ್ಬು ಬೆಣ್ಣೆಯಂತೆ ಕರಗಿಸುತ್ತದೆ ಈ ಪಾನೀಯ


4. ಜೀರ್ಣಕ್ರಿಯೆಗೆ ಸಹಾಯ ಮಾಡುವುದು: 
ಮೂಲಂಗಿಯಲ್ಲಿ ನೈಸರ್ಗಿಕವಾಗಿಯೇ ಅಧಿಕ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುವುದು. ಜೊತೆಗೆ ದೇಹದಲ್ಲಿ ಇರುವ ತ್ಯಾಜ್ಯವನ್ನು ಕರುಳಿನ ಮೂಲಕ ಹೊರ ಹಾಕಲು ಸಹಾಯ ಮಾಡುವುದು. ಇದರ ಸೇವನೆಯು ಮಲಬದ್ಧತೆಯನ್ನು ನಿವಾರಿಸುವುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.